ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕರ್ನಾಟಕದ ಮಹಿಳೆಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂಪರ್ ನೀಡಿದ್ದು, ಬಸ್ ಪ್ರಯಾಣ ಉಚಿತ ಮಾಡಿದೆ. ಈ ಹೊತ್ತಲ್ಲೇ ಗಂಡ್ ಮಕ್ಳು ನಮಗೆ ಏನೂ ಇಲ್ವಾ? ಅಂತಾ ಯೋಚಿಸ್ತಾ ಇದ್ರು. ಆದ್ರೆ ಈಗ ಕರ್ನಾಟಕದ ಗಂಡು ಮಕ್ಕಳಿಗೂ ಬಂಪರ್ ಆಫರ್ ನೀಡಿದೆ ರಾಜ್ಯ ಸರ್ಕಾರ!
ಹೌದು, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಗಂಡು ಮಕ್ಕಳಿಗೂ 50% ರಿಸರ್ವೇಷನ್ ಘೋಷಿಸಿದೆ ಸಿದ್ದರಾಮಯ್ಯ ಸರ್ಕಾರ. ಈ ಮೂಲಕ ಇಷ್ಟುದಿನ ಕಾಲ ಮಹಿಳೆಯರು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಇದ್ದ ಸೌಲಭ್ಯ ಗಂಡ್ ಹೈಕ್ಳಿಗೂ ಸಿಕ್ಕಂತಾಗಿದೆ. ಈ ವಿಚಾರ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಕನ್ಫರ್ಮ್ ಮಾಡಿದ್ದಾರೆ. ಹಾಗೇ ಮಹಿಳೆಯರು ಬಸ್ ಪ್ರಯಾಣ ಮಾಡಲು ಇರುವ ನಿಯಮಗಳನ್ನ ಅಧಿಕೃತವಾಗಿ ತಿಳಿಸಿದ್ದು, ಆ ಮಾಹಿತಿ ಇಲ್ಲಿದೆ ತಿಳಿಯಿರಿ.
ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್! ಕಾಂಗ್ರೆಸ್ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಸೇರಿತ್ತು. ಅದರಂತೆ ಇಂದು ಐದೂ ಗ್ಯಾರಂಟಿ ಘೋಷಿಸಿ, ಎಲ್ಲಾ ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ಸನ್ನದ್ಧವಾಗಿದೆ. ಹಾಗೇ ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಸೇವೆ ಲಭ್ಯವಾಗುತ್ತೆ ಎಂದು ಸರ್ಕಾರ ತಿಳಿಸಿದೆ. ಹಾಗಾದ್ರೆ ಫ್ರೀ ಬಸ್ ಪ್ರಯಾಣದ ನಿಯಮ ಏನು? ಯಾವ ದಾಖಲೆ ತೋರಿಸಬೇಕು? ಬನ್ನಿ ತಿಳಿಯೋಣ.
ಎಲ್ಲಿಯವರೆಗೂ ಬಸ್ ಪ್ರಯಾಣ ಫ್ರೀ? ಜೂನ್ 11ರಿಂದ ಎಸಿ ಬಸ್‌ಗಳು ಹಾಗೂ ಐಷಾರಾಮಿ ಬಸ್ ಹೊರತುಪಡಿಸಿ ಕರ್ನಾಟಕದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ. ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ಸಂಸ್ಥೆಯ ಒಟ್ಟು 4 ವಲಯಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಇದೆ. ಕರ್ನಾಟಕದ ಮಹಿಳೆಯರಿಗೆ ಈ ಯೋಜನೆ ಅನ್ವಯ, ಕರ್ನಾಟಕ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಉಚಿತ ಪ್ರಯಾಣ, ಆದರೂ ಟಿಕೆಟ್ ಇರುತ್ತಾ? ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದು ಫ್ರೀ ಬಸ್ ಪ್ರಯಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಜೂನ್ 11ರಿಂದ ರಾಜ್ಯದಲ್ಲಿನ ಎಲ್ಲ ಮಹಿಳೆಯರಿಗೂ ಫ್ರೀ ಬಸ್ ಪ್ರಯಾಣ ಘೋಷಿಸಿದ್ರೂ ಇನ್ನೊಂದು ವಿಚಾರ ಸ್ಪಷ್ಟವಾಗಿಲ್ಲ. ದೆಹಲಿ ಮಾದರಿ ಪಿಂಕ್ ಟಿಕೆಟ್ ಅಥವಾ ಬಸ್ ಪಾಸ್ ವಿತರಿಸುತ್ತಾರಾ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಎಲ್ಲಾ ಮಹಿಳೆಯರಿಗೂ ಬಸ್ ಪಾಸ್ ಅನ್ನ ಉಚಿತವಾಗಿ ವಿತರಿಸುವ ಸಾಧ್ಯತೆ ಇದೆ.
ಖಾಸಗಿ ಬಸ್‌ಗಳಲ್ಲಿ ಸಿಗುವುದಿಲ್ಲ ಉಚಿತ ಸೇವೆ! ಅಂದಹಾಗೆ ಈಗ ರಾಜ್ಯಸರ್ಕಾರ ಘೋಷಣೆ ಮಾಡಿರುವ ಉಚಿತ ಬಸ್ ಪ್ರಯಾಣ ನಿಯಮ ಸರ್ಕಾರಿ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಖಾಸಚಿ ಬಸ್‌ಗಳಿಗೆ ಈ ನಿಯಮಗಳು ಅನ್ವಯ ಆಗೋದಿಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲ ಭಾಗದಲ್ಲಿ ಮಹಿಳೆಯರಿಗೆ ಈ ಅವಕಾಶ ಕೂಡ ಮಿಸ್ ಆಗುವ ಸಾಧ್ಯತೆ ಇದೆ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಒಟ್ನಲ್ಲಿ ರಾಜ್ಯ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಉಚಿತವಾಗಿ ಬಸ್ ಸೇವೆ ಪಡೆಯಬಹುದು. ಆದರೆ ಅವರು ಕರ್ನಾಟಕದ ನಿವಾಸಿಗಳು ಎಂಬುದಕ್ಕೆ ಕೆಲವು ಗುರುತಿನ ಚೀಟಿಯನ್ನ ತೋರಿಸಬೇಕು ಅಷ್ಟೇ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ವೋಟರ್ ಐಡಿಗಳಲ್ಲಿ ಯಾವುದಾದರೂ ಒಂದನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ. ಈಮೂಲಕ ರಾಜ್ಯದಲ್ಲಿ ವಾಸವಿರುವ ಮಹಿಳೆಯರಿಗೆ ಮಾತ್ರ ಈ ಯೋಜನೆ ಸೌಲಭ್ಯ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು.