
ನಿರ್ಮಾಪಕನ ಕಾಲ್ ಹಿಸ್ಟರಿಯಲ್ಲಿ ಅಚ್ಚರಿಯ ಸಂಗತಿ ಬಯಲು; ಹೆಚ್ಚಾಯ್ತು ಬೋಲ್ಡ್ ನಟಿ ಆಶು ರೆಡ್ಡಿಯ ಎದೆ ಬಡಿತ!
A surprising fact is revealed in the producer's call history; Bold actress Ashu Reddy's heart beat increased!
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಆಶು ರೆಡ್ಡಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಿತ ಮುಖ. ಬಿಗ್ ಬಾಸ್ ಶೋ ಮೂಲಕ ಹೆಚ್ಚು ಜನಪ್ರಿಯಳಾದ ಈ ಚೆಲುವೆ, ಬೋಲ್ಡ್ ಲುಕ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಲೂ ಆಗಾಗ ಮುನ್ನೆಲೆಗೆ ಬರುತ್ತಿರುತ್ತಾರೆ. ಬಳಿಕ ವೆಬ್ ಸಿರೀಸ್ ಮತ್ತು ಐಟಂ ಹಾಡಿನಲ್ಲಿಯೂ ಕಾಣಿಸಿಕೊಂಡು ಮನ್ನಣೆ ಗಳಿಸಿದ್ದರು. ಇದೀಗ ಇದೇ ನಟಿಯ ಹೆಸರು ಡ್ರಗ್ಸ್ ವಿಚಾರದಲ್ಲಿ ತಳುಕು ಹಾಕಿಕೊಂಡಿದೆ.
ಇತ್ತೀಚೆಗಷ್ಟೇ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆ.ಪಿ. ಚೌಧರಿ ಅವರ ಬಂಧನವಾಗಿತ್ತು. ಇದೀಗ ಇದೇ ವ್ಯಕ್ತಿ ಪೊಲೀಸ್ ವಿಚಾರಣೆ ವೇಳೆ ಕೆಲವು ಅಚ್ಚರಿಯ ಮಾಹಿತಿಗಳನ್ನು ಪೊಲೀಸ್ ಮುಂದೆ ಬಾಯ್ಬಿಟ್ಟಿದ್ದಾರೆ. ಆ ಪೈಕಿ ಆಶು ರೆಡ್ಡಿಯ ಹೆಸರೂ ಪ್ರಸ್ತಾಪವಾಗಿದೆ.
ಹೀಗೆ ಆಶು ರೆಡ್ಡಿಯ ಹೆಸರು ಕೇಳಿಬರುತ್ತಿದ್ದಂತೆ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಆಶು, ಆರೋಪಗಳನ್ನೆಲ್ಲ ಅಲ್ಲಗೆಳೆದಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ನನ್ನ ಹೆಸರನ್ನು ಕೆಲ ಮಾಧ್ಯಮಗಳು ಎಳೆದು ತರುತ್ತಿವೆ. ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿವೆ. ವಾಸ್ತವವಾಗಿ ನಾನೂ ಯಾರ ಜತೆಗೂ ಸಂಪರ್ಕದಲ್ಲಿಲ್ಲ. ಸದ್ಯಕ್ಕೆ ಈ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರಿಗೆ ಸತ್ಯಾಸತ್ಯತೆ ತಿಳಿಸಲು ಬಯಸುತ್ತೇನೆ. ಸದ್ಯಕ್ಕೆ ಇದೆಲ್ಲ ಸುಳ್ಳು. ಜತೆಗೆ ನನ್ನ ಮೊಬೈಲ್ ನಂಬರ್ ಅನ್ನು ಸಾರ್ವಜನಿಕವಾಗಿಯೂ ಬಿತ್ತರಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ವಿಚಾರಣೆ ಎದುರಿಸುತ್ತಿರುವ ನಿರ್ಮಾಪಕ ಕೆ.ಪಿ ಚೌಧರಿ ಅವರ ಪೋನ್ ಕಾಲ್ ಲಿಸ್ಟ್ ಅನ್ನು ಗಮನಿಸಿದಾಗ ಅದರಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿರುವ ಆಶು ರೆಡ್ಡಿ ಅವರ ಹೆಸರೂ ಇದೆ. ಇವರಷ್ಟೇ ಅಲ್ಲ, ಸಿನಿಮಾ ರಂಗ ಹಲವು ನಟ, ನಟಿಯರಿಗೆ ಡ್ರಗ್ಸ್ ಪೂರೈಕೆ ಮಾಡಿದ ಬಗ್ಗೆಯೂ ಚೌಧರಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಅದರಲ್ಲೂ ನಟಿ ಆಶು ರೆಡ್ಡಿಗೆ ನೂರಾರು ಬಾರಿ ಕರೆ ಮಾಡಿದ್ದರು ಎಂಬುದಕ್ಕೆ ಕಾಲ್ ಲಿಸ್ಟ್ ನಲ್ಲಿನ ಅವರ ಹೆಸರು ಪೊಲೀಸರಿಗೆ ಗೊತ್ತಾಗಿದೆ.
ಕಲಾವಿದರು, ಚಿತ್ರರಂಗದವರ ಒಟ್ಟು 12 ಮಂದಿಯ ಲಿಸ್ಟ್ ಅನ್ನು ಪೊಲೀಸರಿಗೆ ನೀಡಿರುವ ಚೌಧರಿಯ ಫೋನ್ ಕರೆಯ ಲಿಸ್ಟ್ ಮಾತ್ರವಲ್ಲದೆ, ಬ್ಯಾಂಕ್ ವಹಿವಾಟಿನ ಮೇಲೆಯೂ ಕಣ್ಣಿಟ್ಟಿದ್ದು, 11 ಅಪರಿಚಿತ ಖಾತೆಗಳಿಂದ ಬಂದ ಹಣದ ಹಿನ್ನೆಲೆಯನ್ನೂ ಹುಡುಕುತ್ತಿದ್ದಾರೆ.
78 ಲಕ್ಷ ಮೌಲ್ಯದ ಡ್ರಗ್ಸ್ ವಶ
ಕಳೆದ 10 ದಿನಗಳ ಹಿಂದೆ ಡ್ರಗ್ಸ್ ಮಾರಾಟ ಆರೋಪದ ಮೇಲೆ ತೆಲುಗು ನಿರ್ಮಾಪಕ ಕೃಷ್ಣ ಪ್ರಸಾದ್ ಚೌಧರಿ ಎಂಬುವವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಬರೋಬ್ಬರಿ 78 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಕೆಲ ದಿನಗಳಿಂದ ಕೆ.ಪಿ. ಚೌಧರಿ ನೈಜೀರಿಯಾದ ಗೇಬ್ರಿಯಲ್ ಎಂಬಾತನಿಂದ ಗೋವಾದಲ್ಲಿ ಡ್ರಗ್ಸ್ ಖರೀದಿಸಿ ಹೈದರಾಬಾದ್‌ನಲ್ಲಿ ಮಾರಾಟ ಮಾಡುತ್ತಿದ್ದ. ಹೀಗೆ ಹಲವರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವೇಳೆಯೇ ಮೊದಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಬಂಧಿಸಿದ್ದರು.
ಬಂಧಿತನಿಂದ 82.75 ಗ್ರಾಂ ಕೊಕೇನ್, ಒಂದು ಕಾರು, 2.05 ಲಕ್ಷ ನಗದು, 4 ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಗೋವಾದಲ್ಲಿ ಕ್ಲಬ್ ನಡೆಸುತ್ತಿದ್ದ ಕೆಪಿ ಚೌಧರಿ, ಟಾಲಿವುಡ್ ಚಿತ್ರೋದ್ಯಮದ ಕೆಲ ಸೆಲೆಬ್ರಿಟಿಗಳನ್ನು ಗೋವಾಕ್ಕೆ ಕರೆದೊಯ್ದು ಡ್ರಗ್ಸ್ ನೀಡಿದ್ದಲ್ಲದೆ, ಏಪ್ರಿಲ್‌ನಲ್ಲಿ 100 ಪ್ಯಾಕೇಟ್ ಡ್ರಗ್ಸ್ ಅನ್ನು ಹೈದರಾಬಾದ್‌ಗೆ ತಂದಿದ್ದರು.