ಸಿನಿಮಾಸಿನಿಮಾ ಸುದ್ದಿ

ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ

Ileana gave birth to a baby boy

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬಹುಭಾಷಾ ನಟಿ ಇಲಿಯಾನಾ ಡಿಕ್ರೋಸ್‌ ಮಡಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. ಆಗಸ್ಟ್‌ 1ರಂದು ಇಲಿಯಾನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಆ ಸಿಹಿ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

 

ಕಳೆದ ಕೆಲ ತಿಂಗಳಿಂದ ತಾಯ್ತನದ ಖುಷಿ ಅನುಭವಿಸುವ ಪ್ರತಿ ಸಣ್ಣ ಸಣ್ಣ ಕ್ಷಣವನ್ನೂ ಆನಂದಿಸುತ್ತ ಆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯ ಒಂದೊಂದು ಪೋಸ್ಟ್‌ ಹಂಚಿಕೊಳ್ಳುತ್ತಿದ್ದರು ಇಲಿಯಾನಾ. ಇದೀಗ ಸಂಭ್ರಮ ಮುಗಿಲು ಮುಟ್ಟಿದೆ. ಮಗನ ಆಗಮನದಿಂದ ಇಲಿಯಾನಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಆದರೆ, ಮಗುವಿನ ತಂದೆ ಯಾರೆಂಬ ವಿಚಾರವನ್ನು ಇಲಿಯಾನಾ ಈವರೆಗೂ ರಿವೀಲ್‌ ಮಾಡಿಲ್ಲ.

 

ಹೃದಯ ತುಂಬಿ ಬಂದಿದೆ

“ಈ ಜಗತ್ತಿಗೆ ನಮ್ಮ ಡಾರ್ಲಿಂಗ್‌ ಮಗನನ್ನು ಸ್ವಾಗತಿಸಲು ನನಗೆ ಪದಗಳೇ ಸಾಲುತ್ತಿಲ್ಲ. ಈ ಖುಷಿಗೆ ನಮ್ಮ ಹೃದಯ ತುಂಬಿ ಬಂದಿದೆ” ಎಂದು ಇನ್‌ಸ್ಟಾಗ್ರಾಂನಲ್ಲಿ ಮಗನ ಫೋಟೋ ಸಮೇತ ಸಂತಸ ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲ ಮಗನಿಗೂ ಈಗಾಗಲೇ ಹೆಸರನ್ನೂ ಅಂತಿಮ ಮಾಡಿದ್ದು, ಅದನ್ನೂ ಸಹ ರಿವೀಲ್‌ ಮಾಡಿದ್ದಾರೆ. ಇಲಿಯಾನಾ ಅವರ ಈ ಪೋಸ್ಟ್‌ಗೆ ಲಕ್ಷಾಂತರ ಮಂದಿ ಲೈಕ್‌ ಮಾಡಿದ್ದಾರೆ. ಹರಸಿದ್ದಾರೆ.

ಕಾಮೆಂಟ್‌ಗಳೂ ಬರಲಾರಂಭಿಸಿವೆ. ‘ಈ ಹೊಸ ಪ್ರಯಾಣಕ್ಕೆ ಶುಭಾಶಯಗಳು ಇಲಿಯಾನಾ’ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ‘ಎಲ್ಲರಿಗೂ ತಾಯಿಯಾಗುವ ಭಾಗ್ಯ ಸಿಗುವುದಿಲ್ಲ. ನಿಮಗೆ ಅರ್ಥವಾಗಿದೆ, ನೀವು ಪುಣ್ಯವಂತರು” ಎಂಬ ಶುಭ ಸಂದೇಶಗಳೂ ಬಂದಿವೆ.

ಇದನ್ನೂ ಓದಿ...

Back to top button
>