ಕ್ರಿಕೆಟ್ಕ್ರೀಡೆ

ಅಮೆರಿಕದಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ರೋಹಿತ್ ಶರ್ಮಾ

Rohit Sharma started a cricket academy in America

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಅಮೆರಿಕ: ವೆಸ್ಟ್​ ಇಂಡೀಸ್​ ಸರಣಿ ಮುಗಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ಮುಂಬರುವ ಏಷ್ಯಾಕಪ್, ಏಕದಿನ ವಿಶ್ವಕಪ್​ ಸಲುವಾಗಿ ವಿಶ್ರಾಂತಿಯಲ್ಲಿದ್ದಾರೆ. ವಿಂಡೀಸ್​ ಪ್ರವಾಸ ಮುಗಿಸಿದ ಬೆನ್ನಲ್ಲೇ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ತಮ್ಮ ಕ್ರಿಕೆಟ್​ ಅಕಾಡೆಮಿಯನ್ನು ಉದ್ಘಾಟಿಸಿದ್ದಾರೆ. ಆ ಮೂಲಕ ಸಾವಿರಾರು ಯುವಕರಿಗೆ ದಾರಿದೀಪವಾಗಲಿದ್ದಾರೆ.

 

ತಮ್ಮ ಕ್ರಿಕೆಟ್​ ಅಕಾಡೆಮಿಯನ್ನು ಉದ್ಘಾಟಿಸಿರುವ ರೋಹಿತ್​ ಶರ್ಮಾ, ಕಾರ್ಯಕ್ರಮದ ವಿಡಿಯೋ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕ್ರಿಕೆಟ್ ಅಕಾಡೆಮಿಯ ಹೆಸರು ಕ್ರಿಕಿಂಗ್​ಡಮ್​ ಎಂದು ಹೆಸರು. ವಿಶೇಷ ಎಂದರೆ ಈ ಹೆಸರಲ್ಲಿ ಈಗಾಗಲೇ ಭಾರತದಲ್ಲಿ ಅಕಾಡೆಮಿ ಇದೆ. ಇದೀಗ ಇದರ ಬ್ರಾಂಚ್​ ಅನ್ನು ಅಮೆರಿಕದಲ್ಲೂ ಆರಂಭಿಸಿದ್ದಾರೆ. ಇನ್ನು ಸಿಂಗಾಪುರ ಮತ್ತು ಜಪಾನ್​ನಲ್ಲೂ ಅವರ ಕ್ರಿಕೆಟ್​ ಅಕಾಡೆಮಿಗಳಿವೆ.

 

ಸದ್ಯ ಅಮೆರಿಕಾದಿಂದ ಮರಳಿದ ನಂತರ ಏಷ್ಯಾಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಲಿದ್ದಾರೆ. ನಂತರ ಆಸ್ಟ್ರೇಲಿಯಾ ಮತ್ತು ಏಕದಿನ ವಿಶ್ವಕಪ್​ ಟೂರ್ನಿಗೆ ಸಿದ್ಧರಾಗಲಿದ್ದಾರೆ. ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡುವ ಸಲುವಾಗಿ ವಿಂಡೀಸ್ ಎದುರಿನ ಸರಣಿಯ ಭಾಗವಾಗಿದ್ದರೂ, 2 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು. ರೋಹಿತ್ ಜೊತೆಗೆ ಕೊಹ್ಲಿಗೂ ರೆಸ್ಟ್ ನೀಡಲಾಗಿತ್ತು. ಈಗಾಗಲೇ ಟೆಸ್ಟ್​, ಟಿ20 ವಿಶ್ವಕಪ್​ನಲ್ಲಿ ಕಪ್​ ಗೆಲ್ಲಲು ವಿಫಲರಾದ ರೋಹಿತ್, ಈಗ ತವರಿನಲ್ಲಿ ವಿಶ್ವಕಪ್ ಗೆದ್ದರೆ ಚರಿತ್ರೆ ಸೃಷ್ಟಿಸಲಿದ್ದಾರೆ.

ರೋಡ್​ ಸೇಫ್ಟಿ ಸೀರೀಸ್​ನ 3ನೇ ಆವೃತ್ತಿ

3ನೇ ಆವೃತ್ತಿಯ ರೋಡ್​ ಸೇಫ್ಟಿ ವರ್ಲ್ಡ್​ ಸೀರೀಸ್​ಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಇಂಗ್ಲೆಂಡ್​​ನಲ್ಲಿ ಈ ಲೀಗ್​ ನಡೆಯಲಿದೆ. ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಆಟಗಾರರು ಮಾತ್ರ ಭಾಗವಹಿಸಲಿದ್ದಾರೆ. ಸದ್ಯ ಮುಗಿದಿರುವ ಎರಡೂ ಆವೃತ್ತಿಗಳಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಈ ಬಾರಿಯ ವಿಶೇಷ ಅಂದರೆ, ಪಾಕಿಸ್ತಾನ ತಂಡವು ಇದೇ ಮೊದಲ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಎರಡೂ ಆವೃತ್ತಿಗಳು ಭಾರತದಲ್ಲಿ ನಡೆದಿದ್ದವು. ಈಗ ಇಂಗ್ಲೆಂಡ್​ನಲ್ಲಿ ನಡೆಯಲಿದೆ.

 

ಇದನ್ನೂ ಓದಿ...

Back to top button
>