ರಾಜಕೀಯರಾಜ್ಯ

ಬೊಮ್ಮಾಯಿ ಸರ್ಕಾರದ ‘ನಮ್ಮ ಕ್ಲಿನಿಕ್’ಗೆ ದಿನೇಶ್ ಗುಂಡೂರಾವ್ ಮೇಜರ್ ಸರ್ಜರಿ

Dinesh Gundurao Major Surgery for 'Namma Clinic' of Bommai Govt

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು, ಆಗಸ್ಟ್ 6: ಅಸಹಾಯಕರು ಬಡವರಿಗೆ ಅನುಕೂಲ ಆಗಲಿ ಅಂತ ಬಿಜೆಪಿ ಸರ್ಕಾರ ಗುಣಮಟ್ಟದ ಚಿಕಿತ್ಸೆ ನೀಡಲು ಆರಂಭಿಸಿರುವ ಯೋಜನೆ ಇದಾಗಿತ್ತು. ಆದರೆ ಸರ್ಕಾರ ಆಡಳಿತದಲ್ಲಿ ಇದ್ದಾಗಲೇ ಸಾಕಷ್ಟು ಟೀಕೆ ಟಿಪ್ಪಣಿ ‘ನಮ್ಮ ಕ್ಲಿನಿಕ್’ ಮೇಲಿತ್ತು. ಅಗತ್ಯ ಸೌಲಭ್ಯ ಇಲ್ಲ, ಸಿಬ್ಬಂದಿ ಇಲ್ಲ , ಕಾರ್ಪೊರೇಟ್ ಟೈಮ್ ಮೆಂಟೇನ್ ಮಾಡುತ್ತಾರೆ..

 

ಹೀಗೆ ಒಂದಲ್ಲ ಎರಡಲ್ಲ ಸಿಕ್ಕಾಪಟ್ಟೆ ಸಮಸ್ಯೆಗಳನ್ನ ಜನ ಸಾಮಾನ್ಯರು ಹೇಳುತ್ತಲೇ ಇದ್ದರು. ಸದ್ಯ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ನಮ್ಮ‌ ಕ್ಲಿನಿಕ್ ಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ‌. ಸಾಕಷ್ಟು ಉತ್ತಮ ಸೌಕರ್ಯ ಹಲವು ನಮ್ಮ ಕ್ಲಿನಿಕ್ ಅಲ್ಲಿ ಇದ್ದರೂ ಜನ ಇತ್ತ ಕಡೆ ಮುಖ ಹಾಕುತ್ತಾ ಇರಲಿಲ್ಲ. ಯಾವಾಗಲೂ ನಮ್ಮ ಕ್ಲಿನಿಕ್ ಬಿಕೋ ಅಂತಿತ್ತು.

 

ಇದಕ್ಕೆ ಬಹು ಮುಖ್ಯ ಕಾರಣ ಅಂದರೆ ಈ ನಮ್ಮ ಕ್ಲಿನಿಕ್ ನ ಟೈಮಿಂಗ್ಸ್, ಸಮಯ ಬದಲಾವಣೆ ಮಾಡಿ ಅಂತ ಜನರು ಬಹಳ‌ ದಿನದಿಂದ ಮನವಿ ಮಾಡುತ್ತಿದ್ದರು. ಈ ಬಗ್ಗೆ ಈಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಜನರ ಬಹಳ ದಿನಗಳ ಡಿಮ್ಯಾಂಡ್ ಈಡೇರಿಕೆಗೆ ಅರೋಗ್ಯ ಇಲಾಖೆ ಮುಂದಾಗಿದೆ.‌ ನಮ್ಮ‌ ಕ್ಲಿನಿಕ್ ‌ಸಮಯ ಬದಲಾವಣೆಗೆ ಆರೋಗ್ಯ ಸಚಿವರು ಪ್ಲಾನ್‌ ಮಾಡುತ್ತಿದ್ದಾರೆ.

 

ಕೂಲಿ ಕಾರ್ಮಿಕರು ಕೆಲಸ ಹೋಗುವ ಸಮಯಕ್ಕೆ ಹಾಗೇ ಈ ನಮ್ಮ ಕ್ಲಿನಿಕ್ ಟೈಮಿಂಗ್ ಎರಡು ಕೂಡ ಸೇಮ್ ಆಗುತ್ತಿತ್ತು. ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇನ್ನೂ ಎಷ್ಟು ಹೊತ್ತಿಗೆ ಈ ಕ್ಲಿನಿಕ್ ರನ್ ಆಗುತ್ತೆ ಅಂತ ನೋಡೋದಾದರೆ, ಸದ್ಯ ಬೆಳಗ್ಗೆ 9 ಗಂಟೆಗೆ ತೆರದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಮತ್ತೆ 2 ಗಂಟೆಗೆ ತೆರೆದು 4.30ಕ್ಕೆ ಕ್ಲೋಸ್ ಮಾಡುತ್ತಾರೆ.

ಕೂಲಿ ಕಾರ್ಮಿಕರು ಕೆಲಸಕ್ಕೆಗೆ ಹೋಗಿರುತ್ತಾರೆ

ಆದರೆ ಈ ಸಮಯದಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆಗೆ ಹೋಗಿರುತ್ತಾರೆ, ಹೀಗಾಗಿ ಸಮಯ ಬದಲಾವಣೆಗೆ ಆರೋಗ್ಯ ಸಚಿವರು ಮುಂದಾಗಿದ್ದಾರೆ. ಮಧ್ಯಾಹ್ನ‌ 12ರಿಂದ ರಾತ್ರಿ 8ರ ವರೆಗೂ ಕ್ಲಿನಿಕ್ ತೆರೆಯಲು ತಯಾರಿ ನಡಿಯುತ್ತಿದೆ. ಇನ್ನು ಈ ಸಮಯ ಬದಲಾವಣೆ ಕೂಡ ಯಶಸ್ವಿ ಆಗುತ್ತಾ ಅಂತ ಒಂದಿಷ್ಟು ಏರಿಯಗಳಲ್ಲಿ ಚೆಕ್ ಮಾಡಿ ಅದಾದ ಮೇಲೆ ಕಂಪ್ಲೀಟ್ ಆಗಿ ಅನುಷ್ಠಾನ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

 

 

ಎರಡ್ಮೂರು ಕಡೆ ಸಮಯ ಬದಲಾವಣೆ‌

ಅಂದರೆ, ಆರಂಭದಲಿ ಎರಡ್ಮೂರು ಕಡೆ ಸಮಯ ಬದಲಾವಣೆ‌ ಮಾಡಿ, ಜನರಿಂದ ರೆಸ್ಪಾನ್ಸ್ ಬಂದರೆ‌ ಎಲ್ಲ ಕಡೆ ಸಮಯ‌ ಬದಾಲವಣೆ ಮಾಡುವ ಅಲೋಚನೆಯಲ್ಲಿದೆ ಆರೋಗ್ಯ ಇಲಾಖೆ. ಬೆಳಗ್ಗೆ 7ಗಂಟೆಯಿಂದ ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಇರ್ತಾರೆ. ಬಳಿಕ ಮಧ್ಯಾಹ್ನ‌ ಹನ್ನೆರಡು ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡಲಿದ್ದಾರೆ ಅಂತ ಸಚಿವರು ಮಾಹಿತಿ ನೀಡಿದ್ದಾರೆ.

ಸರ್ಕಾರದ ಮಹತ್ವದ ಯೋಜನೆ‌ ನಮ್ಮ‌ ಕ್ಲಿನಿಕ್

ಸರ್ಕಾರದ ಮಹತ್ವದ ಯೋಜನೆ‌ ನಮ್ಮ‌ ಕ್ಲಿನಿಕ್ ಗೆ ಜನರೇ ಬಾರದಿರುವುದು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಸರ್ಕಾರ ಕೂಲಿ‌ ಕಾರ್ಮಿಕರಿಗಾಗಿ ಸಮಯ ಬದಲಾವಣೆ ಮಾಡಲು ಸಚಿವಾಲಯ ಮುಂದಾಗಿದೆ. ಸಂಜೆ ವೇಳೆ ಒಪಿಡಿ ತೆರೆಯುವುದರಿಂದ ಸಾಕಷ್ಟು ಅನುಕೂಲ ಕೂಡ ಆಗಲಿದೆ.‌ ಹೀಗೇ ಆಗುವ ಬದಲಾವಣೆ ಇಂದ ಆದರೂ ಜನರಿಗೆ ಅನುಕೂಲ ಆಗುತ್ತಾ? ಜನ ಈ ಯೋಜನೆಯ ಫಲಾನುಭವಿ ಆಗ್ತಾರಾ ಅಂತ ವೈಟ್ ಮಾಡಬೇಕು..

ಇದನ್ನೂ ಓದಿ...

Back to top button
>