ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
15 ತಿಂಗಳ ಸುದೀರ್ಘ ವಿರಾಮದ ನಂತರ ಐಪಿಎಲ್ 2024ರಲ್ಲಿ ಮರಳುತ್ತಿರುವ ರಿಷಬ್ ಪಂತ್ ತಮ್ಮ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಈ ವರ್ಣರಂಜಿತ ಲೀಗ್‌ನಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಅವರು ಆರಂಭವನ್ನು ಪಡೆದರು, ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 13 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ 26 ಎಸೆತಗಳಲ್ಲಿ 28 ರನ್ ಗಳಿಸಿದ್ದರು. ದೊಡ್ಡ ಸ್ಕೋರ್ ಮಾಡದ ಹತಾಶೆ ಈಗ ರಿಷಬ್ ಪಂತ್ ಅವರ ಮುಖ ಭಾವಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಔಟಾದ ನಂತರ, ಪಂತ್ ಕೋಪದಿಂದ ಗೋಡೆಗೆ ಬ್ಯಾಟ್ ನಿಂದ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
RR ವಿರುದ್ಧದ ಪಂದ್ಯದಲ್ಲಿ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು, ಆದರೆ ತಂಡವು ಮಿಚೆಲ್ ಮಾರ್ಷ್ ಮತ್ತು ರಿಕಿ ಭುಯಿ ಔಟಾದ ನಂತರ ಬಂದ ಪಂತ್ ಡೇವಿಡ್ ವಾರ್ನರ್ ಜೊತೆಗೊ ದೊಡ್ಡ ಇನ್ನಿಂಗ್ಸ್ ಆಡುವ ಇಂಗಿತವಿತ್ತು. ಆದರೆ 28 ರನ್ ಗಳಿಸಿದ್ದಾಗ ಪಂತ್ ಯುಜ್ವೇಂದ್ರ ಚಹಾಲ್ ಬೌಲಿಂಗ್ ನಲ್ಲಿ ಔಟಾಗಿ ಹೊರನಡೆದರು.
ರಿಷಬ್ ಪಂತ್ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿ 28 ರನ್ ಬಾರಿಸಿದ್ದರು. ಪಂತ್ ಔಟಾದ ಬಳಿಕ ಪೆವಿಲಿಯನ್ ಗೆ ಮರಳುತ್ತಿದ್ದಾಗ ಮೈದಾನದ ಹೊರಗೆ ಹೋಗಿ ಗೋಡೆಗೆ ಬ್ಯಾಟ್ ಬಡಿದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.