ಕ್ರಿಕೆಟ್ಕ್ರೀಡೆ

ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​​, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‌ಗಳಿಂದ (DLS ವಿಧಾನ) ಗೆದ್ದಿತ್ತು

In the first match, Punjab Kings won by 7 runs (DLS method) against Kolkata Knight Riders.

RR vs PBKS: ರಾಜಸ್ಥಾನ ರಾಯಲ್ಸ್ (RR) ಮತ್ತು ಪಂಜಾಬ್ ಕಿಂಗ್ಸ್ (PBKS) ಟೂರ್ನಿಯ ಎಂಟನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿದ್ದು, ಇದೇ ಮೊದಲ ಬಾರಿ ಇಲ್ಲಿ ಐಪಿಎಲ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ​​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್​ ನಡೆಸಲಿರುವ ಪಂಜಾಬ್ ಬೃಹತ್​ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ.

ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​​, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‌ಗಳಿಂದ (DLS ವಿಧಾನ) ಗೆದ್ದಿತ್ತು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ, ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 72 ರನ್‌ಗಳ ಜಯ ದಾಖಲಿಸಿತ್ತು. ಇದೀಗ 2ನೇ ಗೆಲುವಿನ ಮೇಲೆ ಉಭಯ ತಂಡಗಳು ಕಣ್ಣಿಟ್ಟಿವೆ. ಎರಡೂ ತಂಡಗಳು​ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿವೆ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI)
ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್(ವಿಕೆಟ್​ ಕೀಪರ್​​), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರನ್, ಸಿಕಂದರ್ ರಾಝಾ, ನಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಅರ್ಶ್‌ದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI)
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್​ ಕೀಪರ್​), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯಜುವೇಂದ್ರ ಚಹಲ್

RR​​ಗೆ ಟಾಪ್​ ಆರ್ಡರ್ಸ್​​ ಬಲ
ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಟಾಪ್​​​ ಆರ್ಡರ್​​ ಬ್ಯಾಟರ್​​ಗಳೇ ಬಲ ತುಂಬಿದ್ದಾರೆ. ಜೋಸ್​ ಬಟ್ಲರ್​​, ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​​​​ ಅಬ್ಬರದ ಬ್ಯಾಟಿಂಗ್​ ನಡೆಸಿದ್ದರು. ಈ ತ್ರಿಮೂರ್ತಿಗಳು ತಲಾ ಅರ್ಧಶತಕ ಸಿಡಿಸಿ, ಪಂದ್ಯದ ಗೆಲುವಿನ ರೂವಾರಿಗಳಾಗಿದ್ದರು. ಈ ಪಂದ್ಯಕ್ಕೂ ಇವರನ್ನೇ ನೆಚ್ಚಿಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ದೇವದತ್​ ಪಡಿಕ್ಕಲ್​, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್​​ ಅವರು ವೈಫಲ್ಯ ಮೆಟ್ಟಿನಿಲ್ಲಬೇಕಿದೆ. ಬೌಲಿಂಗ್​​​ನಲ್ಲಿ ಆರ್​​​ ಅಶ್ವಿನ್​, ಯಜುವೇಂದ್ರ ಚಹಲ್​, ಟ್ರೆಂಟ್​​​​​ ಬೋಲ್ಟ್​​ ಅವರಿಗೆ ಸಾಥ್​ ನೀಡಬಲ್ಲ ಅನುಭವಿ ಬೌಲರ್​​ಗಳ ಕೊರತೆ ಕಾಡುತ್ತಿದೆ. SRH ವಿರುದ್ಧ ಚಹಲ್​ 4 ವಿಕೆಟ್​ ಕಬಳಿಸಿ ಮಿಂಚಿದ್ದರು.

ಪಂಜಾಬ್​ಗೆ ಭಾನುಕ ಶಕ್ತಿ
ನಾಯಕನಾಗಿ ಶಿಖರ್​ ಧವನ್​ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬಾರಿಸಿದ್ದಾರೆ. ಬ್ಯಾಟಿಂಗ್​​​​ನಲ್ಲಿ 40 ರನ್​​​ ಗಳಿಸಿದ್ದ ಗಬ್ಬರ್​, ಇಂದು ಕೂಡ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಭಾನುಕ ರಾಜಪಕ್ಸೆ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಇವರಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್​ ಅತ್ಯುತ್ತಮ ನಿರ್ವಹಣೆ ತೋರುವ ಅನಿವಾರ್ಯತೆ ಇದೆ. ದುಬಾರಿ ಆಟಗಾರ ಸ್ಯಾಮ್​ ಕರನ್​​ ಇಂದು ಟ್ರಂಪ್​​​​​ ಎನಿಸಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ.

ಪಂದ್ಯದ ನೇರ ಪ್ರಸಾರ
ಈ ಪಂದ್ಯ ಸೇರಿದಂತೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ ನೆಟ್​ವರ್ಕ್​​​ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಇದೇ ವೇಳೆ ಮೊಬೈಲ್‌ನಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.

ಉಭಯ ತಂಡಗಳ ಮುಖಾಮುಖಿ
ರಾಜಸ್ಥಾನ – ಪಂಜಾಬ್​ ಕಿಂಗ್ಸ್​​ ತಂಡಗಳು, ಒಟ್ಟು 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಜಸ್ಥಾನ 14 ಸಲ ಗೆಲುವಿನ ನಗೆ ಬೀರಿದ್ದರೆ, ಪಂಜಾಬ್​ 10 ಜಯ ಸಾಧಿಸಿದೆ. ಹಾಗಾಗಿ ಧವನ್​​ ಪಡೆ ಗೆಲುವಿನ ಸಂಖ್ಯೆ ಏರಿಸಲು ಸಜ್ಜಾಗಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್​ ಆರ್ಮಿ, ಜಯದ ಓಟ ಮುಂದುವರೆಸಲು ರೆಡಿಯಾಗಿದೆ.

ಇದನ್ನೂ ಓದಿ...

Back to top button
>