
ವಿನೋದ್ ರಾಜ್ ಮದುವೆ ಬಗ್ಗೆ ಹಿರಿಯ ನಟಿ ಲೀಲಾವತಿ ಮೌನ ; ಪ್ರಕಾಶ್ ರಾಜ್ ಮೇಹು ಮತ್ತೊಂದು ಪೋಸ್ಟ್ ಮೂಲಕ ಕೌಂಟರ್
Veteran actress Leelavati is silent about Vinod Raj's marriage; Prakash Raj Mehu countered with another post
Prakash Raj mehu: ದಿನದಿಂದ ದಿನಕ್ಕೆ ಹಿರಿಯ ನಟಿ ಲೀಲಾವತಿ ಅವರ ಬದುಕಿನ ಗೌಪ್ಯ ಮಾಹಿತಿಗಳು ಒಂದೊಂದಾಗಿ ಹೊರಬೀಳುತ್ತಿವೆ. ಡಾ. ರಾಜ್ ಕುಟುಂಬದ ಆಪ್ತ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್ ಪೋಸ್ಟ್‌ನಲ್ಲಿ ಲೀಲಾವತಿ ಅವರ ಕುಟುಂಬಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು.
ಆ ಮಾಹಿತಿಯಲ್ಲಿ ವಿನೋದ್ ರಾಜ್‌ಗೆ ಮದುವೆ ಆದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅವರಿಗೆ ಮಗನೂ ಇದ್ದಾನೆ, ಪತ್ನಿಯೂ ಇರುವ ಬಗ್ಗೆ ಹೇಳಿಕೊಂಡಿದ್ದರು. ಮಹಾಲಿಂಗ್ ಭಾಗವತರ್ ಲೀಲಾವತಿ ಅವರ ಪತಿ ಎಂಬ ವಿಚಾರವನ್ನೂ ಹೇಳಿ ಕೆಲವು ಫೋಟೋಗಳನ್ನು ಮತ್ತು ದಾಖಲೆಗಳನ್ನು ಶೇರ್ ಮಾಡಿದ್ದರು. ಈ ಬೆಳವಣಿಗೆ ಬಳಿಕ ಸ್ವತಃ ಲೀಲಾವತಿ ಮುಂದೆ ಬಂದು ಮಗನ ಮದುವೆ ಬಗ್ಗೆ ಮೌನ ಮುರಿದಿದ್ದರು. ಹೀಗಿರುವಾಗಲೇ ಪ್ರಕಾಶ್ ರಾಜ್ ಮೇಹು ಇದೀಗ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಮೇಹು ಹೊಸ ಪೋಸ್ಟ್‌ನಲ್ಲೇನಿದೆ?
“ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. “ಯುವರಾಜ”ನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ ಮೇಹು.
ಮಗನ ಮದುವೆ ಬಗ್ಗೆ ಮೌನ ಮುರಿದ ಲೀಲಾವತಿ..
ಸಿನಿವುಡ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ಲೀಲಾವತಿ ಆಡಿದ ಮಾತುಗಳು ಇಲ್ಲಿವೆ. “ಎಂಥೆಂಥವರ ಮದುವೆ ಆ ಹಾಲ್‌ನಲ್ಲಿ ಆಯಿತು, ಪ್ಯಾಲೇಸ್‌ನಲ್ಲೆಲ್ಲ ಮಾಡ್ತಾರೆ. ನನಗೆ ಆ ಚೈತನ್ಯ ಇಲ್ಲ. ಹಾಗಾಗಿ ರಹಸ್ಯವಾಗಿ ಇಡುವುದೇ ಒಳಿತು ಎನಿಸಿತು. ಅವನೇನು ಹೆಣ್ಣು ಹುಡುಗಿಯಲ್ಲ, 9 ತಿಂಗಳು ಕದ್ದು ಬಸುರಿಯಾಗಿ ಅವನ ಮದುವೆ ಮಾಡಿಲ್ಲ. ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲೂ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಯಾಕೆ ನಿಮಗೆ ಇಷ್ಟೇ ಜನ ಸಿಕ್ಕರೆ? ಎಂಬ ಮಾತು ಕೇಳಿ ಬಂದರೂ, ನಾನು ಮಾತನಾಡಿರಲಿಲ್ಲ”
“ಮಾತನಾಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು. ಆ ವಿಚಾರದಲ್ಲಿ ನನಗೆ ತುಂಬ ಭಯ. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ. ನಮ್ಮ ಅಂತರಂಗ ಸುದ್ದಿಯನ್ನೆಲ್ಲ ಯಾಕೆ ಕೇಳ್ತಿದ್ದಾರೆ. ಆದರೆ, ಯಾರು ಏನೇ ಹೇಳಿದರೂ ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿಯೇ ಇದ್ದೇನೆ. ಕಡು ಬಡವಳು ನಾನು. ಜಮೀನು ತೆಗೆದುಕೊಂಡಿದ್ದು, 30 ಸಾವಿರಕ್ಕೆ.. ಸೊಸೆಗೆ ಒಳ್ಳೆಯ ಬಂಗಲೆ ಇದೆ. ನನಗೆ ನೋವುಂಟು ಮಾಡುವವರು ನರಕದಲ್ಲಿ ಬೀಳ್ತಾರೆ. ಎಲ್ಲವನ್ನೂ ಹೇಳುವುದಕ್ಕೆ ಆಗಲ್ಲ. ಸಂಕೋಚ ನನಗೂ ಆಗುತ್ತದೆ. 600 ಸಿನಿಮಾಗಳಲ್ಲಿ ನಟಿಸಿದ್ದರೂ ಸಂಕೋಚ ಇದೆ”
ಇರೋ ಒಬ್ಬ ಮಗನ ಮದುವೆ ವಿಜ್ರಂಭಣೆಯಿಂದ ಮಾಡೋಕೆ ಆಗಲಿಲ್ವೇ ಎಂದು ಅನಿಸಿದೆ. ಪರಮಾತ್ಮನ್ನ ಕೇಳೋದೆ ಆಯ್ತು. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿ ಆಗದಿರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಆಗಲಿ ಎಂದೇ ಬಯಸ್ತಾಳೆ” ಎಂದಿದ್ದಾರೆ ಲೀಲಾವತಿ.
ಮೇಹು ಮೊದಲ ಪೋಸ್ಟ್‌ನಲ್ಲೇನಿತ್ತು?
ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ!
ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ!!
ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ!!!
ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ…
ವಿನೋದ್ ರಾಜ್ ಅವರ ಹೆಂಡತಿ ಅನು ಮನೆ ಕೆಲಸದ ಹುಡುಗಿಯಲ್ಲ ಆಕೆಯ ಅಣ್ಣ ತಮಿಳುನಾಡಿನಲ್ಲಿ ಒಬ್ಬ ಉನ್ನತ ಅಧಿಕಾರಿ! ಮತ್ತು ಇವರಿಬ್ಬರ ಮದುವೆ ನಡೆದದ್ದು ತಿರುಪತಿಯಲ್ಲಿ ವಿಶೇಷವೆಂದರೆ ಆ ಮದುವೆಲ್ಲಿ ಫೋಟೋಗಳನ್ನೆ ತೆಗೆಸಿಲ್ಲ ಅದರ ಉದ್ದೇಶ ಏನಿರಬಹುದು???