ಆರೋಗ್ಯ

ದೇಹಕ್ಕೆ ಚೈತನ್ಯ ಸಿಗುವಂತೆ ಮಾಡಲು ಹಣ್ಣಿನ ರಸಗಳು ಸಹಕಾರಿ.

Fruit juices help to energize the body.

ಬೇಸಿಗೆ ಬಂತೆಂದರೆ ದೇಹ ತಣಿಸುವ ಜ್ಯೂಸ್‌ಗಳನ್ನು ಕುಡಿಯಲು ಹೆಚ್ಚು ಖುಷಿ ಎನ್ನಿಸುತ್ತದೆ. ನೀವು ಈಜುಕೊಳದಲ್ಲಿ ಈಜಾಡಿ ಬಂದಿರಲಿ, ಕಚೇರಿಯಲ್ಲಿ ಕುಳಿತಿರಲಿ ಅಥವಾ ವಿಶ್ರಾಂತ ಭಾವದಲ್ಲಿರಲಿ ಹಣ್ಣಿನ ರಸಗಳು ದೇಹಕ್ಕೆ ಚೈತನ್ಯ ನೀಡುತ್ತವೆ. ಇವು ಬಿಸಿಲಿನ ತಾಪವನ್ನು ನೀಗಿಸಿ, ದೇಹದಲ್ಲಿ ನೀರಿನಾಂಶ ಇರುವಂತೆ ನೋಡಿಕೊಳ್ಳುತ್ತವೆ. ನಿಂಬೆಪಾನಕದಿಂದ ಮಾವಿನಹಣ್ಣಿನ ಲಸ್ಸಿವರೆಗೆ ಈ ಹಣ್ಣಿನ ಪಾನೀಯಗಳನ್ನು ತಯಾರಿಸಿ, ಕುಡಿಯುವ ಮೂಲಕ ತಾಪ ನೀಗಿಸಿಕೊಳ್ಳಬಹುದು. ಅಂತಹ ಕೆಲವು ಹಣ್ಣಿನ ಪಾನೀಯಗಳು ಇಲ್ಲಿವೆ.

ಕಲ್ಲಂಗಡಿ ಹಣ್ಣಿನ ರಸ: ಕಲ್ಲಂಗಡಿ ಹಣ್ಣಿನ ತಿರುಳಿಗೆ ನೀರು ಹಾಗೂ ನಿಂಬೆರಸ ಸೇರಿಸಿ ರುಬ್ಬಿ. ಸಣ್ಣ ಸಕ್ಕರೆ ಸೇರಿಸಿ ಕರಗಲು ಬಿಡಿ. ನಂತರ ಐಸ್‌ತುಂಡುಗಳನ್ನು ಹಾಕಿ ಕುಡಿಯಲು ಕೊಡಿ.

ಪೀಚ್ ಐಸ್‌ ಟೀ: ಬ್ಲ್ಯಾಕ್‌ ಟೀಯನ್ನು ಚೆನ್ನಾಗಿ ಕುದಿಸಿ, ತಣ್ಣಗಾಗಲು ಬಿಡಿ. ಇದಕ್ಕೆ ಪೀಚ್‌ ಹಣ್ಣಿನ ತುಂಡುಗಳನ್ನು ಸೇರಿಸಿ. ಅದಕ್ಕೆ ಜೇನುತುಪ್ಪ ಹಾಕಿ, ತಣ್ಣಗಾಗಲು ಫ್ರಿಜ್‌ನಲ್ಲಿಡಿ. ನಂತರ ಕುಡಿಯಿರಿ.

ಮಾವಿನಹಣ್ಣಿನ ಲಸ್ಸಿ: ಕಳಿತ ಮಾವಿನಹಣ್ಣಿನ ತಿರುಳು, ಮೊಸರು ಹಾಗೂ ಹಾಲನ್ನು ನುಣ್ಣಗೆ ರುಬ್ಬಿ. ಅದಕ್ಕೆ ಜೇನುತುಪ್ಪ ಅಥವಾ ಸಕ್ಕರೆ ಸೇರಿಸಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ. ಫ್ರಿಜ್‌ನಲ್ಲಿಟ್ಟು ತಣಿಸಿ ನಂತರ ಕುಡಿಯಿರಿ.

ಅನಾನಸ್‌ ತೆಂಗಿನಹಾಲಿನ ಸ್ಮೂಥಿ: ಅನಾನಸ್‌ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ. ಅದಕ್ಕೆ ತೆಂಗಿನಹಾಲು ಹಾಗೂ ಐಸ್‌ಕ್ಯೂಬ್‌ ಸೇರಿಸಿ ರುಬ್ಬಿ. ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಫ್ರಿಜ್‌ನಲ್ಲಿಟ್ಟು ಕುಡಿಯಿರಿ.

ರಸ್‌ಬೆರಿ ಪಾನಕ: ನೀರಿಗೆ ಸಕ್ಕರೆ, ನಿಂಬೆರಸ ಸೇರಿಸಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ಕಲಕಿ. ಅದಕ್ಕೆ ತಾಜಾ ರಸ್‌ಬೆರಿ ಹಣ್ಣುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ. ಇದನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾದ ಮೇಲೆ ಕುಡಿಯಿರಿ.

ಸ್ಟ್ರಾಬೆರಿ, ತುಳಸಿ, ನಿಂಬೆ ಪಾನಕ: ನೀರಿಗೆ ನಿಂಬೆರಸ ಹಾಗೂ ಸಕ್ಕರೆ ಸೇರಿಸಿ ಕರಗುವವರೆಗೂ ಕಲಕಿ. ಇದಕ್ಕೆ ತಾಜಾ ಸ್ಟ್ರಾಬೆರಿ ಹಾಗೂ ತುಳಸಿ ಎಲೆ ಹಾಕಿ ರುಬ್ಬಿ. ಈ ಪಾನಕವನ್ನು ಫ್ರಿಜ್‌ನಲ್ಲಿಟ್ಟು ಕುಡಿಯಿರಿ.

ಬ್ಲೂಬೆರಿ ಪುದಿನಾ ಪಾನಕ: ನಿಂಬೆ ಪಾನಕ ಸಿದ್ಧ ಮಾಡಿಕೊಳ್ಳಿ. ಅದಕ್ಕೆ ಬ್ಲೂಬೆರಿ ಹಾಗೂ ಪುದಿನಾ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಐಸ್‌ಕ್ಯೂಬ್‌ ಸೇರಿಸಿ ಕುಡಿಯಲು ಕೊಡಿ.

ಇದನ್ನೂ ಓದಿ...

Back to top button
>