ಸ್ಪಿನ್ ಪಿಚ್ನಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ; ಬಲಿಷ್ಠ ಚೆನ್ನೈಗೆ ಅಗ್ನಿಪರೀಕ್ಷೆ
Rajasthan won the toss and elected to bat on a spin pitch; Ordeal for mighty Chennai
ಪ್ರಿಯಲಚ್ಛಿ sambramaprabha
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಅದರಂತೆ ಧೋನಿ ಪಡೆ ಮೊದಲು ಬೌಲಿಂಗ್ ನಡೆಸಲಿದ್ದು, ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲು ಪ್ಲಾನ್ ರೂಪಿಸಿದೆ. ಇನ್ನು ಚೆನ್ನೈ ಮತ್ತು ರಾಜಸ್ಥಾನ್ ತಂಡಗಳ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಈ ಸ್ಪಿನ್ ಪಿಚ್ನ ಯಾರಿಗೆ ಲಾಭ ತಂದುಕೊಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಸೇಡಿಗೆ ಸಜ್ಜಾದ ಸಿಎಸ್ಕೆ
ಹಾಲಿ ಟೂರ್ನಿಯಲ್ಲಿ ಸಿಎಸ್ಕೆ ಮತ್ತು ಆರ್ಆರ್ ಈಗಾಗಲೇ ಒಂದು ಬಾರಿ ಮುಖಾಮುಖಿಯಾಗಿವೆ. ಈ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಗೆದ್ದು ಬೀಗಿತ್ತು. ರಾಜಸ್ಥಾನ್ 20 ಓವರ್ಗಳಲ್ಲಿ 175 ಗಳಿಸಿತ್ತು. ಆದರೆ ಸಿಎಸ್ಕೆ 172 ರನ್ಗಳಿಸಿ 3 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಈಗ ಈ ಸೇಡು ತೀರಿಸಿಕೊಳ್ಳಲು ಧೋನಿ ಪಡೆ ಸಜ್ಜಾಗಿದೆ.
ಕಳೆದ ಪಂದ್ಯಗಳಲ್ಲಿ ಫಲಿತಾಂಶ
ಪ್ರಸಕ್ತ ಟೂರ್ನಿಯಲ್ಲಿ ಚೆನ್ನೈ ಅಮೋಘ ಪ್ರದರ್ಶನ ತೋರುತ್ತಿದೆ. ಕಳೆದ 3 ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತಿದೆ. 10 ಅಂಕ ಪಡೆದು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ್ ಕಳೆದ ಎರಡು ಪಂದ್ಯಗಳಿಂದ ಸೋತಿದೆ. ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 4ರಲ್ಲಿ ಜಯಿಸಿದ್ದು, 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.
ಉಭಯ ತಂಡಗಳ ಮುಖಾಮುಖಿ
ಚೆನ್ನೈ ಮತ್ತು ರಾಜಸ್ಥಾನ್ ತಂಡಗಳು ಒಟ್ಟು 27 ಬಾರಿ ಪರಸ್ಪರ ಎದುರಾಗಿವೆ. ಆದರೆ, ಸಿಎಸ್ಕೆ ತಂಡವೇ 15 ಸಲ ಗೆದ್ದು ಬೀಗಿದೆ. 12 ಬಾರಿ ರಾಜಸ್ಥಾನ್ ಜಯಭೇರಿ ಬಾರಿಸಿದೆ.
ಪಿಚ್ ರಿಪೋರ್ಟ್
ಜೈಪುರದ ಸವಾಯಿ ಮಾನ್ಸಿಂಗ್ ಮೈದಾನವು ನಿಧಾನಗತಿ ಪಿಚ್ನಲ್ಲಿ ಸಾಗುತ್ತದೆ. ಕಳೆದ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕೇವಲ 298 ರನ್ ಗಳಿಸಲಾಗಿತ್ತು. ಇದು ವೇಗಿಗಳಿಗೂ ಹೆಚ್ಚು ನೆರವಾಗುತ್ತದೆ. ಟಾಸ್ ಗೆದ್ದ ತಂಡವು ಚೇಸಿಂಗ್ಗೆ ಆದ್ಯತೆ ನೀಡುತ್ತದೆ. ಪಂದ್ಯವು ಸಾಗಿದಂತೆ ಇಬ್ಬನಿ ಸಮಸ್ಯೆಯೂ ಕಾಡುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮಥೀಶ ಪತಿರಣ, ಆಕಾಶ್ ಸಿಂಗ್
ರಾಜಸ್ಥಾನ್ ರಾಯಲ್ಸ್ ತಂಡ
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಸಂದೀಪ್ ಶರ್ಮಾ ಆ್ಯಡಂ ಝಂಪಾ, ಟ್ರೆಂಟ್ ಬೌಲ್ಟ್, ಯುಜುವೇಂದ್ರ ಚಹಲ್