ರಾಜ್ಯವಿಶೇಷ

ಧರ್ಮಸ್ಥಳದಲ್ಲಿ 51ನೇ ಸಾಮೂಹಿಕ ವಿವಾಹ; ಹಸೆಮಣೆ ಏರಿದ 52 ಅಂತರ್ಜಾತಿ ಜೋಡಿ

51st mass wedding at Dharamsthala; 52 inter-caste couples who rose to the throne

follow https://kugellager-leitner.at/eutytidail ವರದಿ: ಪ್ರಿಯಲಚ್ಛಿ
https://www.thejordanelle.com/msd4au59 ಮಂಗಳೂರು: “ಪ್ರೀತಿ, ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇ ದುರಾಭ್ಯಾಸಕ್ಕೂ ತುತ್ತಾಗದೆ, ಬದುಕುತ್ತೇವೆ” ಹೀಗೆಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಹಾಗೂ ಆಯಾ ಜಾತಿಯ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ 201 ಜೋಡಿ ಸಪ್ತಪದಿ ತುಳಿದರು.

follow ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಬುಧವಾರ (ಮೇ 3) ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ವಿವಾಹ ನಡೆಯಿತು. 51ನೇ ವರ್ಷದ ಸಾಮೂಹಿಕ ವಿವಾಹವಿದು. ಇಲ್ಲಿ 52 ಜೋಡಿ ಅಂತರ್ಜಾತೀಯ ಎಂಬುದು ವಿಶೇಷ. ಚಿತ್ರನಟ ದರ್ಶನ್ ಆಗಮಿಸಿ, ಜೋಡಿಯನ್ನು ಅಭಿನಂದಿಸಿದ್ದು ಮತ್ತೊಂದು ಆಕರ್ಷಣೆ.

http://thefurrybambinos.com/abandoned/0w6rjioyts ಈ ವೇಳೆ ಮಾತನಾಡಿದ ದರ್ಶನ್, ಜೋಡಿಗಳಿಗೆ ಶುಭ ಹಾರೈಸಿದರು. ಪತಿ, ಪತ್ನಿ ಪರಸ್ಪರ ಹೊಂದಾಣಿಕೆ, ತಾಳ್ಮೆ ಮತ್ತು ಸಹನೆಯಿಂದ ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಅನುಭವಿಸಿ ಸಾರ್ಥಕ ಜೀವನ ನಡೆಸಬೇಕು ಎಂದು ಡಾ. ಹೆಗ್ಗಡೆ ಈ ಸಂದರ್ಭ ಕರೆ ನೀಡಿದರು.

https://variatheater.uk/2024/11/16/l8114o0zef click here ಹೊರರಾಜ್ಯದವರೂ ಇದ್ದರು:
ಹೊರರಾಜ್ಯಗಳಾದ ಕೇರಳದ 3, ಆಂಧ್ರಪ್ರದೇಶದ 1 ಜೋಡಿ ವಿವಾಹವಾದರೆ, ಬೆಳ್ತಂಗಡಿಯ 5, ಪುತ್ತೂರಿನ 6, ಮಂಗಳೂರಿನ 5, ಉಡುಪಿ ಜಿಲ್ಲೆಯ 24, ಉತ್ತರ ಕನ್ನಡದ 17, ಶಿವಮೊಗ್ಗದ 16, ಚಿಕ್ಕಮಗಳೂರಿನ 14, ಮೈಸೂರಿನ 13, ಹಾಸನದ 11, ಬೆಂಗಳೂರಿನ 10, ತುಮಕೂರಿನ 10 ಜೋಡಿ ಸೇರಿ ರಾಜ್ಯದ 22 ಜಿಲ್ಲೆಗಳಿಂದ ಬಂದಿದ್ದು, ಇವರಲ್ಲಿ 52 ಜೋಡಿ ಅಂತರ್ಜಾತಿ ವಿವಾಹವಾದರು. ಪ.ಜಾತಿಯ 52 ಜೋಡಿ ಸೇರಿ ಒಟ್ಟು 37 ಸಮುದಾಯದ 201 ಜೋಡಿಗಳ ಪೈಕಿ, 57 ಕೂಲಿ ಕಾರ್ಮಿಕರು, 13 ಕೃಷಿಕರು, 13 ವ್ಯಾಪಾರಿಗಳು, 35 ಚಾಲಕ ವೃತ್ತಿಯವರು, 75 ಖಾಸಗಿ ಉದ್ಯೋಗಿಗಳು, 1 ಸರಕಾರಿ ಉದ್ಯೋಗಿ, 5 ಮರದ ಕೆಲಸ ಮಾಡುವವರು, ಇಬ್ಬರು ಮೀನುಗಾರಿಕೆ ಮಾಡುವವರು ಸೇರಿದ್ದಾರೆ.

see url source ಸಾಮೂಹಿಕ ವಿವಾಹ ಯಾಕಾಗಿ?
1972ರಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಲ್ಲಿ ಆರಂಭವಾದ ಸಾಮೂಹಿಕ ವಿವಾಹ ಪರಿಕಲ್ಪನೆಯ ಮೂಲ ಉದ್ದೇಶವೇ ವರದಕ್ಷಿಣೆ ಪಿಡುಗು ಹೋಗಲಾಡಿಸುವುದು ಹಾಗೂ ಸಾಮಾಜಿಕ ಪರಿವರ್ತನೆ. ಅದೆಷ್ಟೋ ಬಡವರು ಮದುವೆಗೆಂದೇ ಜೀವಮಾನಪೂರ್ತಿ ಸಾಲ ಮಾಡಿಕೊಂಡು, ಅದಕ್ಕಾಗಿಯೇ ಜೀತಕ್ಕಿಳಿಯುವವರೂ ಇದ್ದ ಸನ್ನಿವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸಾಮೂಹಿಕ ವಿವಾಹ ವರ್ಷಂಪ್ರತಿ ನಡೆಸುವ ಯೋಜನೆಯನ್ನು ಕೈಗೊಂಡಿತು. ಕಳೆದ ವರ್ಷದವರೆಗೆ 12,576 ಜೋಡಿ ಹಸೆಮಣೆಗೇರಿದ್ದು, ಇದೀಗ 201 ಜೋಡಿ ಸೇರ್ಪಡೆಯಾಗಿದೆ.

ಇದನ್ನೂ ಓದಿ...

Back to top button
>