ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಿಡಲ್ ಆರ್ಡರ್ ಬ್ಯಾಟರ್ ಅಂಬಟಿ ರಾಯುಡು ಈ ಲೀಗ್ಗೆ ವಿದಾಯ ಘೋಷಿಸಿದ್ದಾರೆ. ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯವೇ ತಮ್ಮ ಕೊನೆಯ ಪಂದ್ಯವೆಂದು ಆಂಧ್ರ ಪ್ರದೇಶದ ಆಟಗಾರ ಖಚಿತಪಡಿಸಿದ್ದಾರೆ.
2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ (CSK 2023) ಭಾಗವಾಗಿರುವ ಅಂಬಟಿ ರಾಯುಡು ಫ್ರಾಂಚೈಸಿಯೊಂದಿಗೆ 2 ಟ್ರೋಫಿ ಗೆದ್ದಿದ್ದಾರೆ. ಅವರು ತಮ್ಮ ಐಪಿಎಲ್ ಜರ್ನಿಯನ್ನು 2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಸಿದ್ದರು. ಇದೀಗ ಸುದೀರ್ಘ 14 ವರ್ಷಗಳ ಐಪಿಎಲ್ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿರುವ ರಾಯುಡು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ನ ಫೈನಲ್ ಪಂದ್ಯಕ್ಕೂ ಮುನ್ನ ಈ ನಿರ್ಧಾರ ಪ್ರಕಟಿಸಿದ್ದಾರೆ.
ಕಳೆದ ಬಾರಿಯೇ ನಿವೃತ್ತಿ ನಿರ್ಧಾರ
2018ರಿಂದ ಯಲ್ಲೋ ಆರ್ಮಿ ತಂಡದ ಭಾಗವಾದ ರಾಯುಡು, 2022ರ 15ನೇ ಆವೃತ್ತಿಯ ಐಪಿಎಲ್ನಲ್ಲೇ ಹಿಂದೆ ಸರಿಯಲು ನಿರ್ಧರಿಸಿದ್ದರು. ಆದರೆ ಸಿಎಸ್ಕೆ ಫ್ರಾಂಚೈಸಿಯು ರಾಯುಡು ಅವರನ್ನು ಮನವೊಲಿಸುವಲ್ಲಿ ಸಕ್ಸಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಕೂಡ ರಾಯುಡು ಚೆನ್ನೈ ಪರ ಆಡುತ್ತಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ಯಾವುದೇ ಯೂ ಟರ್ನ್ ಪಡೆಯುವುದಿಲ್ಲ ಎಂಬುದನ್ನು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.
5 ಟ್ರೋಫಿ ಗೆದ್ದಿದ್ದಾರೆ
14 ವರ್ಷಗಳ ಸುದೀರ್ಘ ಐಪಿಎಲ್ ಕರಿಯರ್ನಲ್ಲಿ ಒಟ್ಟು 5 ಬಾರಿ ಟ್ರೋಫಿ ಗೆದ್ದ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ 3 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಬಾರಿ ಚಾಂಪಿಯನ್ ತಂಡದ ಸದಸ್ಯನಾಗಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ರಾಯುಡು 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿ ಕೇವಲ 139 ರನ್ ಕಲೆಹಾಕಿದ್ದಾರೆ. ಅವರ ಆಟ ಭಾರಿ ಟೀಕೆಗೂ ಗುರಿಯಾಗಿತ್ತು.
ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ತಂಡ 2 ಶೇಷ್ಠ ತಂಡಗಳು, 11 ಬಾರಿ ಪ್ಲೇ ಆಫ್, 8 ಫೈನಲ್ಗಳು, 5 ಟ್ರೋಫಿಗಳು. ಇವತ್ತಿನದು 6ನೇ ಫೈನಲ್. ಆದರೆ ಇಂದಿನ ಮಹತ್ವದ ಪಂದ್ಯ ನನ್ನ ಪಾಲಿಗೆ ಕೊನೆಯ ಪಂದ್ಯವಾಗಲಿದೆ. ಈ ಆವೃತ್ತಿಯಲ್ಲಿ ತುಂಬಾ ಎಂಜಾಜ್ ಮಾಡಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಈ ಬಾರಿ ಯೂ ಟರ್ನ್ ಇರಲ್ಲ ಎಂದು ರಾಯುಡು ತಮ್ಮ ಟ್ವೀಟ್ ಮೂಲಕ ವಿದಾಯ ಘೋಷಿಸಿದ್ದಾರೆ.
2013ರಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ರಾಯುಡು ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದಿದ್ದರು. ಇದು ಫ್ರಾಂಚೈಸಿಗೂ ಮೊದಲೆನೇಯದಾಗಿತ್ತು. ಆ ಆವೃತ್ತಿಯಲ್ಲಿ ಎಲ್ಲ ಪಂದ್ಯಗಳಲ್ಲಿ ಆಡಿದ್ದ ರಾಯುಡು, 2015 ಮತ್ತು 2017 ರಲ್ಲೂ ಇನ್ನೂ ಎರಡು ಪ್ರಶಸ್ತಿಗಳನ್ನು ಮುಂಬೈ ಪರವಾಗಿಯೇ ಗೆದ್ದಿದ್ದರು. ಬಳಿಕ ಚೆನ್ನೈ ಸೇರಿದ ವರ್ಷವೇ 2018ರಲ್ಲಿ ಪ್ರಶಸ್ತಿ ಗೆದ್ದರು. ಆ ಆವೃತ್ತಿಯಲ್ಲಿ 16 ಪಂದ್ಯಗಳಲ್ಲಿ 602 ರನ್ ಗಳಿಸಿದ್ದರು. ನಂತರ 2021ರಲ್ಲಿ ವಿಜೇತ ಸಿಎಸ್ಕೆ ತಂಡದ ಭಾಗವಾಗಿದ್ದರು.
200ಕ್ಕಿಂತ ಹೆಚ್ಚು ಪಂದ್ಯಗಳು
ಐಪಿಎಲ್ ಇತಿಹಾಸದಲ್ಲಿ 200ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರಲ್ಲಿ ಅಂಬಟಿ ರಾಯುಡು ಕೂಡ ಒಬ್ಬರು. ಅವರು 4239 ರನ್ ಗಳಿಸಿರುವ ಬಲಗೈ ಆಟಗಾರ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪರಿಣಾಮ