ರಾಜಕೀಯರಾಜ್ಯ

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನ: ಡಾ.ಉಮೇಶ್ ಜಾಧವ್

Congress government collapse after Lok Sabha elections: Dr. Umesh Jadhav

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ 

ಕಲಬುರಗಿ: ಕರ್ನಾಟಕದಲ್ಲಿ ಬಿಜೆಪಿಗೆ (BJP) ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಲೋಕಸಭೆ ಚುನಾವಣೆಯ Lok Sabha Election) ನಂತರ ಕಾಂಗ್ರೆಸ್ ಸರ್ಕಾರವು ಪತನಗೊಳ್ಳಲಿದೆ ಎಂದು ಸಂಸದ ಡಾ.ಉಮೇಶ್ ಜಿ ಜಾಧವ್ ಭವಿಷ್ಯ ನುಡಿದಿದ್ದಾರೆ.

ಚಿತ್ತಾಪುರದಲ್ಲಿ ಶನಿವಾರ ನಡೆದ ಮಂಡಲ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳುಗಳನ್ನು ಹೇಳುವುದರ ಮೂಲಕ ಮತದಾರರಲ್ಲಿ ಭ್ರಮೆ ಹುಟ್ಟಿಸುತ್ತಿದೆ, ಲೋಕಸಭೆಯ ಚುನಾವಣೆ ರಂಗೇರುತ್ತಿದ್ದು, ಎಲ್ಲೆಡೆ ಬಿಜೆಪಿಯ ಪರ ಅಲೆ ಎದ್ದಿದೆ ಎಂದ ಅವರು, ಕಾಂಗ್ರೆಸ್ಸಿನ ವಿಪರೀತ ದೌರ್ಜನ್ಯ ನೀತಿಯಿಂದಾಗಿ ಚಿತ್ತಾಪುರ ಸೇರಿದಂತೆ ಎಲ್ಲೆಡೆ ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಭೀಮಾ ನದಿ ತೀರದ ಜನರು ಕುಡಿಯಲು ನೀರಿಲ್ಲದೆ ಹಾಹಾಕಾರವೆದ್ದರೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣೆತ್ತಿಯೂ ನೋಡದಿರುವುದು ದುರದೃಷ್ಟಕರ. ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸುವ ಜನಪ್ರತಿನಿಧಿಗಳು ನಮಗೆ ಯಾಕೆ ಬೇಕೆಂಬ ಪ್ರಶ್ನೆ ಉದ್ಭವಿಸಿದೆ ಎಂದು ಟೀಕಿಸಿದರು.

ಅಭಿವೃದ್ಧಿಯು ಬಿಜೆಪಿಯಿಂದ ಮಾತ್ರ ಆಗುತ್ತಿದ್ದು, 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್ ಪ್ರೀಮಿಯರ್ ರೈಲು ಹಾಗೂ ಸಾಪ್ತಾಹಿಕ ರೈಲು, ನಿರುದ್ಯೋಗ ನಿವಾರಣೆಗಾಗಿ 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರ್ಗಿಯಲ್ಲಿ ಮೆಗಾ ಜವಳಿ ಪಾರ್ಕ್, ಚಿತ್ತಾಪುರ ಸೇರಿದಂತೆ 120 ಹಳ್ಳಿ- ತಾಂಡಾಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆ ಅನುಷ್ಠಾನ ಮಾಡಿದೆ. ಮುಂದಿನ 45 ದಿನಗಳಲ್ಲಿ ಮತದಾರರನ್ನು ಜಾಗೃತರನ್ನಾಗಿಸಿ ನರೇಂದ್ರ ಮೋದಿಯವರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಜಾಧವ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವ ಬಾಬುರಾವ್ ಚೌಹಾಣ್, ಚಿತ್ತಾಪುರ ಮಂಡಲದ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಶರಣಪ್ಪ ತಲ್ವಾರ್, ಶಿವಲಿಂಗಪ್ಪ ಒಡೆದ್, ನಾಗರಾಜ್ ಹೂಗಾರ್ ರಾಜು ಕುಲಕರ್ಣಿ ಶರಣಗೌಡ ಭೀಮನಳ್ಳಿ, ಮಲ್ಲಿಕಾರ್ಜುನ್, ಮಲ್ಲಿನಾಥ ಇನಾಮ್ದಾರ್, ನಾಗರಾಜ ಮಂಗಲಗಿ, ಬಸವರಾಜ್ ಬೆಣ್ಣೂರ್, ಶಿವು ಸುಣಗಾರ, ಮಲ್ಲಿಕಾರ್ಜುನ ಪೂಜಾರಿ, ಶಂಕರ ವಕೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ...

Back to top button
>