ಕ್ರಿಕೆಟ್ಕ್ರೀಡೆ

ಕ್ರಿಕೆಟ್​​ ಕಾಶಿಯಲ್ಲಿ ಟಾಸ್​ ಗೆದ್ದ ಗುಜರಾತ್​ ಚೇಸಿಂಗ್​ ಆಯ್ಕೆ; ಜೇಸನ್​ ರಾಯ್​​ ಔಟ್​; ಪಂದ್ಯಕ್ಕೆ ಮಳೆ ಭೀತಿ

Gujarat won the toss and chose to chase in Kashi; Jason Roy out; Rain threat for the match

ಪ್ರಿಯಲಚ್ಛಿ sambramaprabha
ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್​ ಕದನದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗುಜರಾತ್​ ಟಾಸ್​ ಗೆದ್ದು, ಚೇಸಿಂಗ್​ ಆಯ್ಕೆ ಮಾಡಿಕೊಂಡಿದೆ.
16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಗುಜರಾತ್​ ಟೈಟಾನ್ಸ್ ತಂಡದ ನೇತೃತ್ವ ವಹಿಸಿರುವ ಹಾರ್ದಿಕ್​ ಪಾಂಡ್ಯ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟಿಂಗ್​ ನಡೆಸಲಿರುವ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಸಾರಥಿ ನಿತೀಶ್ ರಾಣಾ, ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಗುಜರಾತ್​​ ಕಳೆದ ಪಂದ್ಯದ ಸೋಲಿನ ಸೇಡಿನ ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ. ಮಳೆ ಭೀತಿ ಕಾಡುವ ಸಾಧ್ಯತೆ ಇದೆ.

ಕಳೆದ ಪಂದ್ಯದಲ್ಲಿ ಗುಜರಾತ್​ಗೆ ಸೋಲು
ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳು 2ನೇ ಮುಖಾಮುಖಿಗೆ ಸಜ್ಜಾಗುತ್ತಿವೆ. ಗುಜರಾತ್​ ವಿರುದ್ಧದ ಕೋಲ್ಕತ್ತಾ 3 ವಿಕೆಟ್​ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ರಿಂಕು ಸಿಂಗ್​​ ಕೊನೆಯ 5 ಎಸೆತಗಳಲ್ಲಿ 5 ಸಿಕ್ಸರ್​​ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. ಗುಜರಾತ್ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ​ 204 ರನ್​ ಗಳಿಸಿತು. ಆದರೆ ಕೋಲ್ಕತ್ತಾ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 207 ಗಳಿಸಿತು. ಇದೀಗ ಈ ಪಂದ್ಯದ ಸೇಡು ತೀರಿಸಿಕೊಳ್ಳಲು ಹಾರ್ದಿಕ್​ ಪಡೆ ಸಜ್ಜಾಗಿದೆ.

ಕಳೆದ ಪಂದ್ಯದಲ್ಲಿ ಫಲಿತಾಂಶ
ಪ್ರಸಕ್ತ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಗುಜರಾತ್​ ಟೈಟಾನ್ಸ್​​ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಎದುರು ಭರ್ಜರಿ ಜಯ ಸಾಧಿಸಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆದ್ದು, 3ರಲ್ಲಿ ಸೋತಿದೆ. 10 ಅಂಕ ಪಡೆದಿರುವ ಹಾರ್ದಿಕ್​ ಪಡೆ, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ವಿಜಯ ಸಾಧಿಸಿದೆ. ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಕೆಕೆಆರ್​​, 5ರಲ್ಲಿ ಸೋತಿದೆ. ಪಾಯಿಂಟ್​ ಟೇಬಲ್​​​ನಲ್ಲಿ 6ನೇ ಸ್ಥಾನದಲ್ಲಿದೆ.

ಉಭಯ ತಂಡಗಳ ಮುಖಾಮುಖಿ
ಗುಜರಾತ್​ ಮತ್ತು ಕೋಲ್ಕತ್ತಾ ತಂಡಗಳು ಒಟ್ಟು 2 ಬಾರಿ ಪರಸ್ಪರ ಮುಖಾಮುಖಿ ಆಗಿವೆ. ಆದರೆ ಉಭಯ ತಂಡಗಳು ತಲಾ ಒಂದು ಪಂದ್ಯವನ್ನೂ ಗೆದ್ದು ಬೀಗಿವೆ. ಇದೀಗ ಮತ್ತೊಂದು ಗೆಲುವಿನ ಮೇಲೆ ಎರಡು ತಂಡಗಳು ಕಣ್ಣಿಟ್ಟಿವೆ.

ಪಿಚ್​ ರಿಪೋರ್ಟ್​​
ಕ್ರಿಕೆಟ್​ ಕಾಶಿ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಮೈದಾನ ಬ್ಯಾಟಿಂಗ್​ಗೆ ಸ್ವರ್ಗ ಎಂದೇ ಪ್ರಸಿದ್ಧಿ. ಮೊದಲ ಇನ್ನಿಂಗ್ಸ್​​ನಲ್ಲಿ ಸರಾಸರಿ 222 ರನ್​ ಇದೆ. ಸ್ಪಿನ್ನರ್ಸ್​ ಇಲ್ಲಿ ಹೆಚ್ಚಿನ ವಿಕೆಟ್‌ ಪಡೆದಿದ್ದಾರೆ. ಟಾಸ್ ಗೆದ್ದ ಉಭಯ ತಂಡಗಳು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತವೆ. ಹಗಲಿನಲ್ಲಿ ಪಂದ್ಯ ನಡೆಯುವ ಕಾರಣ, ಇಬ್ಬನಿ ಸಮಸ್ಯೆ ಕಾಡುವುದಿಲ್ಲ. ಆದರೆ ಮೋಡ ಮುಚ್ಚಿದ ವಾತಾವರಣ ಇದ್ದು, ಮಳೆ ಭೀತಿ ಕಾಡುವ ಸಾಧ್ಯತೆ ಇದೆ.

ಗುಜರಾತ್​ ಟೈಟಾನ್ಸ್ ತಂಡ
ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶುವಾ ಲಿಟಲ್. ಇಂಪ್ಯಾಕ್ಟ್​ ಪ್ಲೇಯರ್​- ಶುಭ್ಮನ್ ಗಿಲ್.

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ
ಎನ್ ಜಗದೀಸನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ...

Back to top button
>