ಕ್ರಿಕೆಟ್ಕ್ರೀಡೆ

ರೆಹಮಾನುಲ್ಲಾ ಅರ್ಧಶತಕ, ರಸೆಲ್​ ಆರ್ಭಟ; ಹಾರ್ದಿಕ್​ ಪಡೆಗೆ 180 ರನ್​ ಟಾರ್ಗೆಟ್​ ನೀಡಿದ ಕೋಲ್ಕತ್ತಾ

Rehmanullah half-century, Russell Arbhata; Kolkata gave Hardik Pade a target of 180 runs

ಪ್ರಿಯಲಚ್ಛಿ sambramaprabha
ಈಡನ್​ ಗಾರ್ಡನ್ಸ್​ ಮೈದಾನದಲ್ಲಿ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡವು ಉತ್ತಮ ಮೊತ್ತ ಕಲೆ ಹಾಕಿದೆ. ಆರಂಭದಲ್ಲಿ ರೆಹಮಾನುಲ್ಲಾ ಗುರ್ಬಾಜ್​​ (81), ಕೊನೆಯಲ್ಲಿ ಆ್ಯಂಡ್ರೆ ರಸೆಲ್​ (34) ಅವರ ಆರ್ಭಟದಿಂದ ಕೆಕೆಆರ್​ 20 ಓವರ್​​ಗಳಲ್ಲಿ 179 ರನ್​​ ಸವಾಲಿನ ಮೊತ್ತ​ ಗಳಿಸಿದೆ. ಮೋಡ ಕವಿದ ವಾತಾವರಣ ಕಂಡು ಬಂದ ಕಾರಣ, ಈ ಪಂದ್ಯವು 45 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾಗೆ, ನಿರೀಕ್ಷಿತ ಆರಂಭ ಸಿಗಲಿಲ್ಲ. ಎನ್​ ಜಗದೀಸನ್​ ಮತ್ತೆ ನಿರಾಸೆ ಮೂಡಿಸಿದರು. ಬಿರುಸಿನ ಆಟಕ್ಕೆ ಕೈ ಹಾಕಿದರೂ, 19 ರನ್​ಗಳಿಗೆ ಆಟ ಮುಗಿಸಿದರು. ಮೊಹಮ್ಮದ್​ ಶಮಿ ಬೌಲಿಂಗ್​ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಶಾರ್ದೂಲ್​​ ಠಾಕೂರ್​ 4 ಎಸೆತಗಳಲ್ಲಿ ಎದುರಿಸಿ ಶಮಿ ಬೌಲಿಂಗ್​​​ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು.

ರೆಹಮಾನುಲ್ಲಾ ಬಿರುಗಾಳಿ ಆಟ
ಆರಂಭದಲ್ಲೇ ಡಬಲ್​ ಆಘಾತಕ್ಕೆ ಒಳಗಾದರೂ ನಿರ್ಭೀತಿಯಿಂದ ಬ್ಯಾಟ್​ ಬೀಸಿದ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್​, ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಮನಬಂದಂತೆ ದಂಡಿಸಿದರು. ಸಂಘಟಿತ ಬೌಲಿಂಗ್​ ದಾಳಿಯನ್ನು ಮೆಟ್ಟಿ ನಿಂತು ರನ್​ ಗತಿ ಏರಿಸಿದರು. ಆದರೆ ಯಾರೂ ಗುರ್ಬಾಜ್​ಗೆ ಸಾಥ್​ ನೀಡಲಿಲ್ಲ. ಶಾರ್ದೂಲ್​ ಬಳಿಕ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​ (11) ಕೂಡ ಬೇಗನೇ ಔಟಾದರು. ನಾಯಕ ನಿತೀಶ್​ ರಾಣಾ ಬೌಂಡರಿ ಸಿಡಿಸಿ ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. ಜೋಷುವಾ ಲಿಟಲ್​ ಇಬ್ಬರಿಗೂ ಗೇಟ್​ಪಾಸ್​ ನೀಡುವಲ್ಲಿ ಯಶಸ್ವಿಯಾದರು.

ಅರ್ಧಶತಕದ ಸಿಡಿಸಿದ ಗುರ್ಬಾಜ್
ಬೆಂಕಿ-ಬಿರುಗಾಳಿ ಆಟವಾಡಿದ ಗುರ್ಬಾಜ್​,​ ಕುಸಿತ ತಂಡಕ್ಕೆ ಆಸರೆಯಾದರು. ಜವಾಬ್ದಾರಿ ಆಟದ ಜೊತೆಗೆ ಅಗತ್ಯ ಇದ್ದಾಗಲೆಲ್ಲಾ ಸ್ಫೋಟಿಸುತ್ತಿದ್ದ ಆಫ್ಘನ್​ ಆಟಗಾರ ಅರ್ಧಶತಕ ಸಿಡಿಸಿದರು. ವೇಗದ ಬ್ಯಾಟಿಂಗ್​ನಿಂದಲೇ ಗಮನ ಸೆಳೆದ ರೆಹಮಾನುಲ್ಲಾ, ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಉತ್ತಮ ಹಂತಕ್ಕೆ ಕೊಂಡೊಯ್ಯುತ್ತಿದ್ದ ಗುರ್ಬಾಜ್​​ ಕೂಡ ವಿಕೆಟ್​ ಒಪ್ಪಿಸಿದರು. ನೂರ್​ ಅಹ್ಮದ್​ ಬೌಲಿಂಗ್​ ಹೊರ ನಡೆದರು.

ಗುರ್ಬಾಜ್​ 39 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್​​ಗಳ ನೆರವಿನಿಂದ ಬರೋಬ್ಬರಿ 81 ರನ್​ ಚಚ್ಚಿದರು. ಒಂದೆಡೆ ಗುರ್ಬಾಜ್​ ಆರ್ಟಿಸುತ್ತಿದ್ದರೆ, ಮತ್ತೊಂದೆಡೆ ರಿಂಕು ಸಿಂಗ್​ ಕೂಲ್​ ಆಗಿ ಬ್ಯಾಟ್​ ಬೀಸುತ್ತಿದ್ದರು. ಬಳಿಕ ರಿಂಕು ಸಿಂಗ್​ ಜೊತೆಯಾದ ಆ್ಯಂಡ್ರೆ ರಸೆಲ್​​​, ಅಗ್ರೆಸ್ಸಿವ್​ ಆಟಕ್ಕೆ ಕೈ ಹಾಕಿದರು. ನಿಧಾನವಾಗಿ ಬ್ಯಾಟ್​ ಬೀಸಿದ ರಿಂಕು ಸಿಂಗ್​​ 20 ಎಸೆತಗಳಲ್ಲಿ 19 ರನ್​ ಗಳಿಸಿ ಔಟಾದರು.

ಕೊನೆಯಲ್ಲಿ ಮಿಂಚಿದ ವಿಂಡೀಸ್ ದೈತ್ಯ ರಸೆಲ್​, ಗುಜರಾತ್​ ಬೌಲರ್​ಗಳಿಗೆ ಬೆಂಡೆತ್ತಿದರು. 19 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 34 ರನ್​ ಚಚ್ಚಿದರು. ಆದರೆ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಶಮಿಗೆ ವಿಕೆಟ್​ ಒಪ್ಪಿಸಿದರು. ಡೇವಿಡ್​ ವೈಸ್​ ಅಜೇಯ 8 ರನ್​ ಗಳಿಸಿದರು. ಅಂತಿಮವಾಗಿ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿತು. ಗುಜರಾತ್​ ಪರ ಮೊಹಮ್ಮದ್​ ಶಮಿ 3 ವಿಕೆಟ್​, ಜೋಷುವಾ ಲಿಟರ್​, ನೂರ್​ ಅಹ್ಮದ್​ ತಲಾ 2 ವಿಕೆಟ್​ ಪಡೆದು ಮಿಂಚಿದರು.

.

ಇದನ್ನೂ ಓದಿ...

Back to top button
>